assignment 10

ಉತ್ತಮ್. ಮಾಲೆ. ಸ. ಶಿ. 
ಸ. ಪ್ರೌ.ಶಾಲೆ.ಮದರಕಲ್.
**********//*****///********///***********
ಕೋವಿಡ್ - 19 ಮಹಾಮಾರಿ ಇಂದು ವಿಶ್ವದ ಮನುಕುಲವನ್ನೇ ನಡುಗಿಸುತ್ತಿರುವ ಪರಿಸ್ಥಿತಿಯಲ್ಲಿ ನಮ್ಮನ್ನು ನಾವು ರಕ್ಷಿಸಿಕೊಂಡು ಬದುಕುವ ಸಂದರ್ಭ ಬಂದಿರುವುದು ತುಂಬಾ ನೋವಿನ ಸಂಗತಿ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ವೃತ್ತಿಧರ್ಮಕ್ಕೆ ನ್ಯಾಯ ಒದಗಿಸಿಕೊಡುವುದು ಶಿಕ್ಷಕರಾದ ನಮ್ಮಂತವರ ಪ್ರಮುಖ ಕರ್ತವ್ಯವಾಗಿದೆ. ಪ್ರತಿಯೊಬ್ಬ ಶಿಕ್ಷಕನು ಮಕ್ಕಳ ಕಲಿಕೆಯ ಪ್ರಕ್ರಿಯೆಯಲ್ಲಿ ತಾನು ಒಬ್ಬ ಮುಖ್ಯವಾದ ಭಾಗವಾಗಬೇಕು ಎಂದು ಆಸೆಪಡುತ್ತಾನೆ. ಆದರೆ ಇಂದು ಅಂತಹ ಆಸೆಗೆ ಸದ್ಯದ ಪರಿಸ್ಥಿತಿ ಅದಕ್ಕೆ ಆಸ್ಪದ ಮಾಡಿಕೊಡುತ್ತಿಲ್ಲ. 
                 ಮಕ್ಕಳು ಇಂದು ಕೋವಿಡ್ ರೋಗದ ಕುರಿತು ಮಾಧ್ಯಮಗಳಲ್ಲಿ ಪ್ರಸಾರ ವಾಗುವ ಚಿತ್ರಣ, ಸಂದೇಶ, ಮತ್ತು (ಅನಾವಶ್ಯಕ) ಭಯಾನಕವಾಗಿ ತೋರಿಸುವ ವಿಡಿಯೋ ಗಳಿಂದ ಹೆಚ್ಚು ಭಯಬೀತರಾಗಿದ್ದು ಸದಾ ಅದರ ವಿಚಾರದಲ್ಲಿ ತಲ್ಲೀನರಾಗಿದ್ದಾರೆ. ಅವರನ್ನು ಅ ವಿಚಾರಗಳಿಂದ ಮುಕ್ತ ಮಾಡಿ ಕಲಿಕೆಯತ್ತ ಕರೆತರುವುದು ಈಗ ನಮ್ಮ ಮುಂದೆ ಇರುವ ಬಹು ದೊಡ್ಡ ಸಮಸ್ಯೆ.ಸರಕಾರ ಮಕ್ಕಳ ಹಿತದೃಷ್ಟಿಯಿಂದ ಅನೇಕ ಯೋಜನೆ ಮತ್ತು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಪ್ರತಿ ಏರಿಯಾಗಳಲ್ಲಿ ಸಿಗುವ ಮಕ್ಕಳಲ್ಲಿ ಸ್ವಲ್ಪ ಚುರುಕಾಗಿ ಕಾರ್ಯಮಾಡುವ  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಏರಿಯಾದಲ್ಲಿ ಬರುವ ಎಲ್ಲಾ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಕಾರ್ಯಕ್ರಮಗಳನ್ನು ವೀಕ್ಷಿಸಲು ತಿಳಿಸುವುದು ಮತ್ತು ವಿದ್ಯಾರ್ಥಿಗಳಿಂದ ಮೇಲ್ವಿಚಾರಣೆ ಮಾಡಿಸುವುದು. ( ಇಂತಹ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ)

Comments

Popular posts from this blog