assignment 9 ಕೋವಿಡ್-19 ರೋಗ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ
ಉತ್ತಮ. ಮಾಲೆ. ಸ. ಶಿ.
ಸ. ಪ್ರೌಢ .ಶಾಲೆ. ಮದರಕಲ್.
****//******//******//******//*************
ಕೋವಿಡ್-19 ರೋಗ ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುವುದು ಮಕ್ಕಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಅಷ್ಟು ಸಮಂಜಸವಲ್ಲ ಎಂಬ ಅಭಿಪ್ರಾಯದೊಂದಿಗೆ ಸರಕಾರ 31 ಜುಲೈ 2020 ವರೆಗೆ ರಜೆಯನ್ನು ಘೋಷಿಸಿದೆ. ಈ ಅವಧಿಯಲ್ಲಿ ಎಲ್ಲಾ ಶಾಲಾ ಶಿಕ್ಷಕರು ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚಿಸಲಾಗಿದ್ದು , ಮಾನ್ಯ ಆಯುಕ್ತರು ಕೆಲವೊಂದು ಚಟುವಟಿಕೆಗಳನ್ನು ಸೂಚಿಸಿದ್ದಾರೆ. ಅದರಂತೆ ಎಲ್ಲ ಶಿಕ್ಷಕರು ಚಟುವಟಿಕೆಗಳನ್ನು ಆಸಕ್ತಿಯಿಂದ ಪೂರೈಸುವಲ್ಲಿ ಮಗ್ನರಾಗಿದ್ದಾರೆ. ಈಗ ಮನೆಯಿಂದಲೇ ಕೆಲಸ ನಿರ್ವಹಿಸುವ ಸಮಯವನ್ನು ಸಂಪೂರ್ಣವಾಗಿ ಬಳಸಿಕೊಂಡು ನಮ್ಮ ವೃತ್ತಿಕೌಶಲ್ಯವನ್ನ ಅಭಿವೃದ್ಧಿ ಮಾಡಿಕೊಳ್ಳಬಹುದಾಗಿದೆ.
ಈ ಕೆಳಕಂಡ ಕೆಲವು ಚಟುವಟಿಕೆ/ ಕಾರ್ಯಗಳನ್ನು ಮಾಡುತ್ತಾ ನನ್ನ ವಿಷಯದ ಜ್ಞಾನ ಮತ್ತು ಆದರೆ ಜೊತೆಗೆ ಆ ಜ್ಞಾನವನ್ನು ಮಕ್ಕಳಿಗೆ ಸಮರ್ಪಕವಾಗಿ ತಲುಪಿಸಲು ಬೇಕಾದ ಕೌಶಲ್ಯವನ್ನು ಪಡೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ.
ಪಾಠ ಯೋಜನೆ ತಯಾರಿಕೆ :- ಈಗಾಗಲೇ ಇಲಾಖೆ ವಾರ್ಷಿಕ ಪಠ್ಯವನ್ನು 120 ಅವಧಿಗಳಿಗೆ ಇಳಿಕೆ ಮಾಡಿದೆ. ಅದರನ್ವಯ ಗಣಿತ ವಿಷಯದಲ್ಲಿ ಕಡಿತ ಗೊಳಿಸಿದ ಪರಿಕಲ್ಪನೆ ಹೊರತುಪಡಿಸಿ ಉಳಿದ ಘಟಕಗಳಿಗೆ 5E ಮಾದರಿಯಲ್ಲಿ ಪಾಠ ಯೋಜನೆ ತಯಾರಿಸಿಕೊಂಡೆವು. ಈ ಸಂದರ್ಭದಲ್ಲಿ ನಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಹೊಸ ವಿಧಾನಗಳನ್ನು ( ಹೆಚ್ಚು ಚಟುವಟಿಕೆ, ಮಗು ಕೇಂದ್ರಿತ) ಪಾಠ ಯೋಜನೆಯಲ್ಲಿ ಅನ್ವಯಿಸಿಕೊಂಡೆವು.
ವಿದ್ಯಾರ್ಥಿಗಳೊಂದಿಗೆ ಸಂವಾದ :- ದಿನಾಲೂ ಕನಿಷ್ಟ 3 ವಿದ್ಯಾರ್ಥಿಗಳಿಗೆ ಕರೆಮಾಡಿ ಕೊವಿಡ್ ರೋಗದ ಕುರಿತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು. ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ತರಗತಿಗಳನ್ನು ವಿದ್ಯಾರ್ಥಿಗಳು ಪ್ರತಿದಿನ ತಪ್ಪದೆ ನೋಡುವಂತೆ ಹೇಳಿ ಹಾಗೂ ಅಲ್ಲಿ ಕೊಡುವಂತಹ ಸರಳ ಪ್ರಯೋಗ , ಚಟುವಟಿಕೆಗಳನ್ನು ತಾವೇ ಸ್ವತಃ ಪ್ರಯತ್ನಿಸಿ ಅದರ ಕುರಿತ ಮಾಹಿತಿಯನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಹೇಳಲಾಯಿತು. ಇದಕ್ಕಾಗಿ ವಾಟ್ಸಪ್ ಗ್ರೂಪ್ ಗಳನ್ನು ತಯಾರಿಸಿ ಅದರ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಗಮನ ವಹಿಸುವುದು. ಅಲ್ಲದೆ ತಂತ್ರಜ್ಞಾನದ ಬಳಕೆಯಿಂದ ಹೇಗೆ ನಾವು ಸದಾ ವಿದ್ಯಾರ್ಥಿಗಳ ಸಂಪರ್ಕದಲ್ಲಿ ಇರಬಹದು ಎಂದು ತಿಳಿಯಿತು.
ಸಹೋದ್ಯೋಗಿಗಳೊಂದಿಗೆ ವಿಚಾರ ವಿನಿಮಯ :- ಈಗ ಮನೆಯಿಂದಲೇ ಕೆಲಸ ಅವಧಿಯಲ್ಲಿ ಸಿಕ್ಕ ಸಮಯವನ್ನು ಸಹದ್ಯೋಗಿಗಳೊಂದಿಗೆ ಮತ್ತು ವಿಷಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಆಡಿಯೋ/ವಿಡಿಯೋ ಮೂಲಕ ಮಾತಾಡಿ ತಮ್ಮ ತಮ್ಮ ಶಾಲೆಯಲ್ಲಿ ಶಿಕ್ಷಣದ ಪ್ರಗತಿಗಾಗಿ, ಉತ್ತಮ ಶಾಲಾ ಪಲಿತಾಂಶಕ್ಕಾಗಿ ಕೈಗೊಂಡ ಕಾರ್ಯಗಳನ್ನು, ಅನುಭವಗಳನ್ನು ಹಂಚಿಕೊಳ್ಳಲಾಯಿತು.
ಮನೆಯಿಂದಲೇ ಕೆಲಸ ಅವಧಿಯಲ್ಲಿ ಸಿಕ್ಕ ಸಮಯವನ್ನು ಸಹದ್ಯೋಗಿಗಳೊಂದಿಗೆ ಮತ್ತು ವಿಷಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಆಡಿಯೋ/ವಿಡಿಯೋ ಮೂಲಕ ಮಾತಾಡಿ ತಮ್ಮ ತಮ್ಮ ಶಾಲೆಯಲ್ಲಿ ಶಿಕ್ಷಣದ ಪ್ರಗತಿಗಾಗಿ, ಉತ್ತಮ ಶಾಲಾ ಪಲಿತಾಂಶಕ್ಕಾಗಿ ಕೈಗೊಂಡ ಕಾರ್ಯಗಳನ್ನು, ಅನುಭವಗಳನ್ನು ಹಂಚಿಕೊಳ್ಳಲಾಯಿತು.
--------------- :ವಂದನೆಗಳು:--------------
Comments
Post a Comment